ವಚನಾಮೃತವರ್ಷಿಣಿ ಮಹೋತ್ಸವ

ವಚನಾಮೃತವರ್ಷಿಣಿ ಮಹೋತ್ಸವ

ವಾರ್ಷಿಕೋತ್ಸವದ ಹೆಸರಿನಲ್ಲಿ ವಚನಜ್ಯೋತಿ ಬಳಗ ನಡೆಸಿಕೊಂಡು ಬರುತ್ತಿದ್ದ ವಿನೂತನ ಉತ್ಸವವೇ "ವಚನಾಮೃತವರ್ಷಿಣಿ ಮಹೋತ್ಸವ". ನೂರಾರು ಶಾಲೆಗಳ ಮಕ್ಕಳು ಒಂದೆಡೆ ಸೇರಿ ವಚನ ಚಳವಳಿಯ ವಿವಿಧ ಪ್ರಕಾರಗಳಾದ ವಚನ ಗಾಯನ, ವಚನ ಮನನ, ವಚನ ವಿವೇಚನ, ವಚನ ಪ್ರಶ್ನ, ವಚನ ಭೂಷಣ ಹಾಗೂ ವಚನ ಚಿತ್ರಗಳಲ್ಲಿ ಭಾಗವಹಿಸುವ ಉತ್ಸವವಿದು. ಎಳೆಯ, ಕಿರಿಯ, ಪ್ರೌಢ, ವಯಸ್ಕ ಹಾಗೂ ಹಿರಿಯ ವರ್ಗಾವಳಿಗಳಲ್ಲಿ ಇದನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಪ್ರತಿ ವರ್ಷವೂ ಸಾವಿರಕ್ಕೂ ಹೆಚ್ಚು ಸ್ಪಧಾರ್ಥಿಗಳು ಈ ವಚನಾಮೃತವರ್ಷಿಣಿ ಮಹೋತ್ಸವದಲ್ಲಿ ಭಾಗವಹಿಸಿದ್ದಾರೆ. ವಚನಗಳನ್ನು ಸೊಗಸಾಗಿ ಹಾಡುವುದು, ನೂರಾರು ವಚನಗಳನ್ನು ಒಂದು ಗಂಟೆಯ ಅವಧಿಯಲ್ಲಿ ಬರೆಯುವುದು, ವಚನಗಳನ್ನು ವಿಮರ್ಶಾತ್ಮಕವಾಗಿ ವಿವೇಚಿಸುವುದು, ವಚನ ಕ್ವಿಜ್‌ನಲ್ಲಿ ನೂರಾರು ಪ್ರಶ್ನೆಗಳಿಗೆ ಉತ್ತರ ಹೇಳುವುದು, ವಚನಕಾರರ ವೇಷಭೂಷಣಗಳನ್ನು ಧರಿಸಿ ಅವರನ್ನು ಅನುಕರಿಸುವುದು ಹಾಗೂ ತಾವು ಕಂಡ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಕೂಡಲಸಂಗಮ, ಕದಳಿ, ಕಲ್ಯಾಣ, ಅನುಭವ ಮಂಟಪ . . . . ಮೊದಲಾದವುಗಳನ್ನು ಚಿತ್ರಿಸುವುದು "ವಚನಾಮೃತವರ್ಷಿಣಿ ಮಹೋತ್ಸವ"ದಲ್ಲಿ ನಡೆಯುತ್ತಾ ಬಂದಿದೆ. ವಚನಾಮೃತವರ್ಷಿಣಿ ಮಹೋತ್ಸವವನ್ನು ಸತತ ಹತ್ತೊಂಬತ್ತು ವರ್ಷಗಳನ್ನು ನಡೆಸಿದ ಹೆಮ್ಮೆಯನ್ನು ಬಳಗ ಹೊಂದಿದ್ದು, ಕಳೆದ ಎರಡು ವರ್ಷಗಳಿಂದ ಅದನ್ನು ಇನ್ನಷ್ಟು ಉನ್ನತೀಕರಿಸಿ “ಮಕ್ಕಳ ವಚನ ಮೇಳ”ವಾಗಿ ರೂಪಿಸಲಾಗಿದೆ.