ಇತರೆ ಕಾರ್ಯಕ್ರಮಗಳು

ಇತರೆ ಕಾರ್ಯಕ್ರಮಗಳು

ವಚನ ಸಂಭ್ರಮ

ಹಂಪಿನಗರದ ಗ್ರಂಥಾಂಗಣದಲ್ಲಿ ನಡೆದ ಎರಡು ದಿನಗಳ ‘ವಚನ ಸಂಭ್ರಮ’ ಕಾರ್ಯಕ್ರಮ ವಚನಜ್ಯೋತಿ ಬಳಗದ ಮತ್ತೊಂದು ವಿಶೇಷ ಕಾರ್ಯಕ್ರಮ. ನಾಡಿನ ಪ್ರಖ್ಯಾತ ಗಾಯಕರುಗಳು ವಚನ ಸಂಭ್ರಮದಲ್ಲಿ ಪಾಲ್ಗೊಂಡು ಎಲ್ಲರನ್ನೂ ಸಂಭ್ರಮಿಸಿದ್ದು ಇದರ ವಿಶೇಷ. ಕರ್ನಾಟಕ ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾದ ಪಂಡಿತ ನರಸಿಂಹಲು ವಡವಾಟಿ ಅವರು ಜ್ಯೊತಿ ಬೆಳಗಿಸುವುದರ ಮೂಲಕ "ವಚನ ಸಂಭ್ರಮ"ವನ್ನು ಉದ್ಘಾಟಿಸಿದರು. ಡಾ|| ಮನುಬಳಿಗಾರ್ ಮುಖ್ಯ ಅತಿಥಿಗಳಾಗಿ ಶುಭ ಕೋರಿದರು. ಹಲವು ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಿರಿಯ ಹಿಂದೂಸ್ಥಾನಿ ಸಂಗೀತ ವಿದ್ವಾಂಸರಾದ ಡಾ|| ಮುದ್ದುಮೋಹನ್, ಜಾನಪದ ಕೋಗಿಲೆ ಶ್ರೀ ಅಪ್ಪಗೆರೆ ತಿಮ್ಮರಾಜು, ಪಂಡಿತ ದೇವೇಂದ್ರಕುಮಾರ ಮುಧೋಳ್, ಪಂಡಿತ ರವೀಂದ್ರ ಸೊರಗಾವಿ, ಪಂಡಿತ ಮಹೇಶ್‌ಕುಮಾರ್ ಹೆರೂರ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಾಯಕ ನಾರಾಯಣರಾವ್ ಮಾನೆ, ತರುಣ ಸಂಗೀತ ಸಂಯೋಜಕರುಗಳಾದ ಭರತ್, ಮೃತ್ಯುಂಜಯ ದೊಡ್ಡವಾಡ, ಆನಂದ ಮಾದಲಗೆರೆ, ಆಂಜನೇಯ ಗದ್ದಿ, ಶ್ರೀ ವೀರಯ್ಯ ಚಿಕ್ಕಮಠ, ಗಾಯಕಿಯರಾದ ಖ್ಯಾತ ಗಾಯಕಿ ಸೀಮಾ ರಾಯ್ಕರ್, ಆರತಿ ಗಣೇಶ್, ಕು|| ಚೇತನಾ ಮುಧೋಳ್, ರಶ್ಮಿ, ಪ್ರೇಮಶಾಂತವೀರಯ್ಯ, ಚಂದ್ರಮತಿಗಿರೀಶ್, ಮೀನಾಕ್ಷಿ ಮೇಟಿ, ರತ್ನ . . . . ಮೊದಲಾದವರು ವಚನಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

ವಚನ ಕಾರ್ತಿಕ

ಕಾರ್ತಿಕ ಮಾಸದಲ್ಲಿ ನಡೆಸುವ "ವಚನ ಕಾರ್ತಿಕ" ಬಳಗದ ಮತ್ತೊಂದು ಕಾರ್ಯಕ್ರಮ. ನಾಡಿನ ಪ್ರಖ್ಯಾತ ಗಾಯಕರಾದ ಪಂ.ದೇವೇಂದ್ರ ಕುಮಾರ ಮುಧೋಳರೊಂದಿಗೆ ಯುವ ಗಾಯಕರುಗಳಾದ ಆಂಜನೇಯ ಗದ್ದಿ, ವೀರಯ್ಯ ಚಿಕ್ಕಮಠ, ಗಾಯಕಿಯರಾದ ಸರಸ್ವತಿ ಹೆಗಡೆ, ಚಂದ್ರಮತಿ, ಪ್ರೇಮ, ರತ್ನ, ಮೀನಾಕ್ಷಿ, ಚೇತನಾ ಅವರುಗಳೊಂದಿಗೆ ಹಿರಿಯ ಹಿಂದೂಸ್ಥಾನಿ ಸಂಗೀತ ವಿದ್ವಾಂಸರಾದ ಡಾ|| ಮುದ್ದುಮೋಹನ್ ಅವರುಗಳು ವಚನ ಕಾರ್ತಿಕದಲ್ಲಿ ವಚನಗಳ ಮೂಲಕ ಶಿವತತ್ತ÷್ವವನ್ನು ಪಸರಿಸಿದರು. ‘ಉದಯವಾಣಿ’ ಪತ್ರಿಕೆಯ ಸಂಪಾದಕ ಶ್ರೀ ತಿಮ್ಮಪ್ಪಭಟ್, ‘ಸಂಯುಕ್ತ ಕರ್ನಾಟಕ’ ಸಂಪಾದಕ ಶ್ರೀ ಹುಣಸವಾಡಿ ರಾಜನ್, ಉದಯ ಟಿ.ವಿ.ಯ ಬೆಲಗೂರು ಸಮೀಉಲ್ಲಾ, ಈ ಟಿವಿಯ ಸೋಮಶೇಖರ ಕವಚೂರು, ಖ್ಯಾತ ಮನೋಶಾಸ್ತçಜ್ಞ ಡಾ|| ಸಿ.ಆರ್. ಚಂದ್ರಶೇಖರ್, ಖ್ಯಾತ ಗಾಯಕಿಯರಾದ ಶ್ರೀಮತಿ ಮಂಜುಳ ಗುರುರಾಜ್, ಶ್ರೀಮತಿ ಚಂದ್ರಿಕಾ ಗುರುರಾಜ್ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಚನ ಸಂಕ್ರಾಂತಿ

ಮಕರ ಸಂಕ್ರಾಂತಿಯಂದು ವಚನಜ್ಯೋತಿ ಬಳಗ "ವಚನ ಸಂಕ್ರಾಂತಿ" ಕಾರ್ಯಕ್ರಮವನ್ನು ಕವಿಗೋಷ್ಠಿಯೊಂದಿಗೆ ನಡೆಸಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ವಿಶ್ರಾಂತ ಅಧ್ಯಕ್ಷರು ಹಾಗೂ ಹಿರಿಯ ಕವಿಗಳೂ ಆದ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯನವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ಬಸವತತ್ತ÷್ವಚಿಂತಕರಾದ ಶ್ರೀ ರಂಜಾನ್‌ದರ್ಗಾ ಅಧ್ಯಕ್ಷತೆ ವಹಿಸಿದ್ದರು.

ವಚನ ಫಾಲ್ಗುಣ

ಫಾಲ್ಗುಣ ಮಾಸದಲ್ಲಿ ವಚನಜ್ಯೋತಿ ಬಳಗ "ವಚನ ಫಾಲ್ಗುಣ" ಕಾರ್ಯಕ್ರಮವನ್ನು ನಡೆಸಿದೆ. ಯುವ ಗಾಯಕರುಗಳಾದ ಆಂಜನೇಯ ಗದ್ದಿ, ಈರಯ್ಯ ಚಿಕ್ಕಮಠ, ಚೇತನಾ ಮುಧೋಳ್, ಚಂದ್ರಮತಿ ಮಜ್ಗಿ, ವೀಣಾಮೂರ್ತಿ ಮೊದಲಾದವರು ವಚನಗಳನ್ನು ಮಧುರವಾಗಿ ಹಾಡಿದರು. ಇದೇ ಸಂದರ್ಭದಲ್ಲಿ ಮಹಾಪ್ರಬಂಧ ಮಂಡಿಸಿ ಪಿ.ಹೆಚ್‌ಡಿ ಪುರಸ್ಕೃತರಾದ ವಿಭೂತಿಪುರ ಮಠದ ಡಾ|| ಮಹಂತಲಿಂಗಶಿವಾಚಾರ್ಯರು, ಕೆ.ಎಲ್.ಇ. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ|| ಶ್ರೀಲತಾ ಹುಂಬರವಾಡಿ, ಬೆಂಗಳೂರು ಸರ್ಕಾರಿ ಕಲಾ ಕಾಲೇಜಿನ ಅರ್ಥಶಾಸ್ತç ವಿಭಾಗದ ಡಾ|| ಸಿ.ಎಲ್. ಗಾಯಿತ್ರಿದೇವಿ ಹಾಗೂ ನಾಟಕ ಅಕಾಡೆಮಿ ಪುರಸ್ಕೃತರಾದ ವಿಜಯನಗರ ಬಿಂಬ ಅಧ್ಯಕ್ಷೆ ಶೋಭಾ ವೆಂಕಟೇಶ್ ಅವರುಗಳನ್ನು ಅಭಿನಂದಿಸಲಾಯಿತು. ಶರಣೆ ಪಾರ್ವತಿ ಶಿರೋಳ್ ವಚನಜ್ಯೋತಿ ಮಹಿಳಾ ವಿಶೇಷಾಂಕವನ್ನು ಬಿಡುಗಡೆ ಮಾಡಿದರು.

ವಚನ ನವರಾತ್ರಿ

ಬಳಗದ ಗೌರವಾಧ್ಯಕ್ಷರಾಗಿದ್ದ ಪ್ರೊ. ಟಿ.ಆರ್. ಮಹಾದೇವಯ್ಯನವರ ಒಡತಿ ಶ್ರೀಮತಿ ರಾಜಮ್ಮನವರು ನವರಾತ್ರಿಯಲ್ಲಿ ಗೊಂಬೆಗಳನ್ನು ಸಾಲಾಗಿ ಜೋಡಿಸಿ ಶಿಸ್ತಿನಿಂದ ಮೈಸೂರು ದಸರಾ ಹಬ್ಬದ ಸಾಂಸ್ಕೃತಿಕ ಮೆರುಗನ್ನು ತಮ್ಮ ಮನೆಯಲ್ಲಿ ಪ್ರತಿವರ್ಷ ಮಾಡುತ್ತಿದ್ದು ವಚನಜ್ಯೋತಿ ಬಳಗದ ಕಲಾವಿದರಾದ ಶ್ರೀ ಅರಬಗಟ್ಟ ಬಸವರಾಜು, ಶ್ರೀಮತಿಯರಾದ ವೀಣಾಮೂರ್ತಿ, ಪ್ರೇಮಶಾಂತವೀರಯ್ಯ, ಚಂದ್ರಮತಿ ಗಿರೀಶ್, ಮೀನಾಕ್ಷಿ ಮೇಟಿ ವಚನಗಳು ಹಾಗೂ ಭಕ್ತಿಗೀತೆಗಳನ್ನು ಹಾಡುವುದರ ಮುಖೇನ "ವಚನ ನವರಾತ್ರಿ"ಯನ್ನು ಆಚರಿಸಲಾಗುತ್ತದೆ.

ವಚನ ದಸರ

ರಾಜಧಾನಿಯ ಸುಬ್ಬಣ್ಣಗಾರ್ಡನ್ನಿನಲ್ಲಿರುವ ಕೆ.ವಿ.ವಿ. ಶಾಲೆಯಲ್ಲಿ ವಚನ ದಸರ ಆಚರಿಸಿದ ಸವಿನೆನಪು ಬಳಗದ್ದಾಗಿದೆ. ಪ್ರಶಸ್ತಿ ಪುರಸ್ಕೃತರಾದ ಶ್ರೀ ಗುಂಡಿಗೆರೆ ವಿಶ್ವನಾಥ್, ಶ್ರೀ ಕೋಟೆ ಅನಂತು, ಶ್ರೀ ಅಶ್ವತ್ಥನಾರಾಯಣದಾಸರನ್ನು ಸನ್ಮಾನಿಸಿ ಗೌರವಿಸುವುದರೊಂದಿಗೆ ನಡೆದ ವಚನ ದಸರಾವನ್ನು ನಾಡೋಜ ಡಾ. ಎಂ. ಚಿದಾನಂದಮೂರ್ತಿ ಉದ್ಘಾಟಿಸಿದರು. ಖ್ಯಾತ ಜನಪದ ಗಾಯಕ ಚಂದಾಪುರದ ಸಿದ್ದರಾಜು, ಸರಸ್ವತಿ ಹೆಗಡೆ, ಡಾ. ಯು.ಎಂ. ರವಿ, ಶ್ವೇತಪ್ರಭು, ಸಿದ್ದರಾಮ ಕೇಸಾಪುರ, ಭವಾನಿ ಲೋಕೇಶ್ ಮೊದಲಾದವರು ವಚನ ದಸರಾದಲ್ಲಿ ಸಂಗೀತದ ಸಂಭ್ರಮವನ್ನು ಹೆಚ್ಚಿಸಿದರು.

ವಚನ ದೀಪಾವಳಿ

ದೀಪಾವಳಿಯನ್ನು ಸುಡುಮದ್ದುಗಳ ಅಬ್ಬರದಲ್ಲಿ ಆಚರಿಸುವುದರ ನಡುವೆ ವಚನಜ್ಯೊತಿ ಬಳಗ "ವಚನ ದೀಪಾವಳಿ"ಯನ್ನು ಪಂ. ರವೀಂದ್ರ ಸೊರಗಾವಿ ಅವರ ಸಿರಿಕಂಠದ ವಚನಗಾಯನದೊಂದಿಗೆ ಆಚರಿಸಿದೆ. ಶ್ರೀಮತಿ ಸುಶೀಲಮ್ಮ - ಶ್ರೀ ಪಂಚಾಕ್ಷರಯ್ಯನವರ ಮನೆಯಲ್ಲಿ ನಡೆದ ಈ ಕಾರ್ಯಕ್ರಮದ ವಿಶೇಷ ಆಕರ್ಷಣೆ ವಚನ ಕೋಲಾಟ ಎಲ್ಲರಲ್ಲೂ ಹೊಸ ಉತ್ಸಾಹವನ್ನು ತಂದಿತು.

ಮನೆಯಂಗಳದಲ್ಲಿ ವಚನ ಸಂವಾದ

ರಾಜಧಾನಿಯ ಹೊರವರ್ತುಲ ರಸ್ತೆಯ ಜಗಜ್ಯೋತಿ ಬಡಾವಣೆಯಲ್ಲಿರುವ ಶಿವಕುಮಾರ್ ಮನೆಯಲ್ಲಿ ನಡೆದ "ಮನೆಯಂಗಳದಲ್ಲಿ ವಚನ ಸಂವಾದ"ವನ್ನು ಉದ್ಘಾಟಿಸಿದ ಬಳಗದ ಗೌರವಾಧ್ಯಕ್ಷರಾದ ಪ್ರೊ. ಟಿ.ಆರ್. ಮಹಾದೇವಯ್ಯನವರು ವಚನಧರ್ಮದ ಪರಿಕಲ್ಪನೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಚಿಂತಕ ಶ್ರೀ ಕೆ.ಬಿ. ಮಲ್ಲೇಶಯ್ಯ, ಉಪನ್ಯಾಸಕಿ ಶ್ರೀಮತಿ ಲೀಲಾದೇಸಾಯಿ, ಶಿಕ್ಷಣ ಸಂಶೋಧಕಿ ಕು|| ಪೊನ್ನಾಂಬಲೇಶ್ವರಿ ಮೊದಲಾದವರು ಸಂವಾದದಲ್ಲಿ ಭಾಗವಹಿಸಿದ್ದರು. ಅದೇ ದಿನ ಸಂಜೆ ಧಾರವಾಡದ ಡಾ|| ಮೃತ್ಯುಂಜಯ ಶೆಟ್ಟರ್ ಅವರು ವಚನ ಗಾಯನವನ್ನು ಪ್ರಸ್ತುತಪಡಿಸಿದರು. ಎಳೆಕಿರಿಯ ಮಕ್ಕಳು ವಚನಚಿತ್ರದಲ್ಲಿ ಭಾಗವಹಿಸಿ ವಚನಗಳನ್ನು ಹಾಡಿ ಕುಣಿದು ಸಂತೋಷಪಟ್ಟರು.

ಇಸುವನಹಳ್ಳಿಯಲ್ಲಿ ಸಂಗೀತದ ಕಲರವ

ಗ್ರಾಮಾಂತರ ಪ್ರದೇಶಗಳಲ್ಲಿಯೂ ವಚನಜ್ಯೋತಿ ಬಳಗ ತನ್ನ ಚಟುವಟಿಕೆಗಳನ್ನು ನಡೆಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಇಸುವನಹಳ್ಳಿಯಲ್ಲಿ ಹೊಸ ವರ್ಷದ ಹಿಂದಿನ ದಿನದಲ್ಲಿ "ಸಂಗೀತದ ಕಲರವ"ವನ್ನು ನಡೆಸಿ ಗ್ರಾಮೀಣ ಬಂಧುಗಳಿಗೆ ಸಂಗೀತದ ಸುಧೆ ಹರಿಸಿತು. ಖ್ಯಾತ ಗಾಯಕ ಶ್ರೀ ಸಿದ್ದರಾಮ ಕೇಸಾಪುರ, ಹಿರಿಯ ಸಂಗೀತ ನಿರ್ದೆಶಕರಾದ ಪಂಡಿತ ದೇವೇಂದ್ರಕುಮಾರ ಪತ್ತಾರ್, ಜನಪದ ಗಾಯಕ ಡಾ. ಯು.ಎಂ. ರವಿ, ಗಾಯಕಿಯರಾದ ಶ್ರೀಮತಿ ಮೀನಾಕ್ಷಿ ಮೇಟಿ ಮತ್ತು ಶ್ರೀಮತಿ ಟಿ.ಎಂ. ಜಾನಕಿಯವರುಗಳು ತಮ್ಮ ಮಧುರ ಗಾಯನದ ಮೂಲಕ ಸಂಗೀತದ ಕಲರವವನ್ನು ಹಬ್ಬಿಸಿದರು. ಶ್ರೀ ಹೊನ್ನಮ್ಮಗವಿ ಮಠಾಧ್ಯಕ್ಷರಾದ ಶ್ರೀ ಶ್ರೀ ರುದ್ರಮುನಿ ಶಿವಾಚಾರ್ಯರು ಮೊದಲಾಗಿ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಉದ್ಯಾನವನದಲ್ಲಿ ಬೇಂದ್ರೆ ನೆನಪು

ಕನ್ನಡದ ಗಾರುಡಿಗ ಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಸ್ಮರಣೆಯನ್ನೂ ಬಳಗ ನಡೆಸಿದೆ. ರಾಜಧಾನಿಯ ವಿಜಯನಗರ ಜೆ.ಪಿ. ಉದ್ಯಾನವನದಲ್ಲಿ ಬೇಂದ್ರೆ ನೆನಪು ಕಾರ್ಯಕ್ರಮವನ್ನು ಹಿರಿಯ ಕವಯತ್ರಿ ಡಾ. ಎಲ್.ಜಿ. ಮೀರಾ ನೇತೃತ್ವದಲ್ಲಿ ಕವಿಗೋಷ್ಠಿ ಮತ್ತು ಶ್ರೀ ಸಿದ್ದರಾಮ ಕೇಸಾಪುರ ನೇತೃತ್ವದಲ್ಲಿ ಗಾಯನದೊಂದಿಗೆ ನಡೆಸಿದೆ.

ವಸತಿ ಸಮುಚ್ಚಯದಲ್ಲಿ ಸಂಗೀತ ಸಾಹಿತ್ಯ ಸಂಭ್ರಮ

ಕನ್ನಡವನ್ನು, ತನ್ಮೂಲಕ ವಚನವನ್ನು ಮನೆ ಮನಕ್ಕೆ ತಲುಪಿಸುವುದು ಬಳಗದ ಮುಖ್ಯ ಕಾರ್ಯೋದ್ಧೇಶವಾಗಿದ್ದು, ಈ ನಿಟ್ಟಿನಲ್ಲಿ ೨೦೧೮ರಲ್ಲಿ ಕೆಂಗೇರಿ ಉಪನಗರದ ಬಂಡೇಮಠ ಬಡಾವಣೆಯ ವಸತಿ ಸಮುಚ್ಛಯದಲ್ಲಿ ಸಂಗೀತ ಸಾಹಿತ್ಯ ಸಂಭ್ರಮವನ್ನು ಕವಿಗೋಷ್ಠಿ ಮತ್ತು ಗೀತ ಗಾಯನದೊಂದಿಗೆ ನಡೆಸಿದೆ. ಹಿರಿಯ ಕವಯತ್ರಿ ಡಾ.ಎಚ್.ಎಲ್. ಪುಷ್ಪ, ಸ್ಥಳೀಯ ಶಾಸಕ ಶ್ರೀ ಎಸ್.ಟಿ. ಸೋಮಶೇಖರ್, ಸಂಘಟಕಿ ಡಾ. ಅನುಪಮ ಪಂಚಾಕ್ಷರಯ್ಯ ಮೊದಲಾದ ಗಣ್ಯರು ಭಾಗವಹಿಸಿದ್ದ ಕಾರ್ಯಕ್ರಮ ಅಪಾರ್ಟ್ಮೆಂಟ್‌ನಲ್ಲಿ ಕನ್ನಡ ಕಲರವವನ್ನು ಹಬ್ಬಿಸಿತು.

ಆನು ಒಲಿದಂತೆ ಹಾಡುವೆನಯ್ಯಾ . . . ಆಧುನಿಕ ವಚನ ಗೋಷ್ಠಿ

ಆಷಾಢದ ಗಾಳಿಗೆ ಸಂಗೀತದ ತಂನನವನ್ನು ನೀಡುವುದರ ಮೂಲಕ ಆನು ಒಲಿದಂತೆ ಹಾಡುವೆನಯ್ಯಾ ಎಂದು ವಚನಗಳನ್ನು ಮನದುಂಬಿ ಹಾಡಿದ ಹಿರಿಮೆ ವಚನಜ್ಯೋತಿ ಬಳಗದ್ದು. ಆಧುನಿಕ ವಚನ ಗೋಷ್ಠಿಯಲ್ಲಿ ಹಲವು ಆಸಕ್ತರು ತಮ್ಮ ವಚನಗಳನ್ನು ವಾಚಿಸಿದರು. ಇದೇ ಸಂದರ್ಭದಲ್ಲಿ ಹಿಂದೂಸ್ಥಾನಿ ಸಂಗೀತದ ಹಿರಿಯ ವಿದ್ವಾಂಸ ಪಂ. ದೇವೇಂದ್ರಕುಮಾರ ಪತ್ತಾರ್ ಅವರನ್ನು ಅವರ ಅರವತ್ತನೆಯ ಹುಟ್ಟುಹಬ್ಬದ ಸಂತಸದಲ್ಲಿ ಅಭಿನಂದಿಸಲಾಯಿತು.

ಕವಿಯ ಮನೆಯಂಗಳದಲ್ಲಿ ಕಾವ್ಯದ ಸಲ್ಲಾಪ; ರಾಗದ ಆಲಾಪ

ಕವಯತ್ರಿ ವಿದ್ಯಾಶ್ರೀ ಹಾರಕೂಡೆ ಅವರ ಮನೆಯಂಗಳದಲ್ಲಿ "ಕವಿಯ ಮನೆಯಂಗಳದಲ್ಲಿ ಕಾವ್ಯದ ಸಲ್ಲಾಪ; ರಾಗದ ಆಲಾಪ"ವನ್ನು ಅತ್ಯಂತ ಸಂಭ್ರಮದೊಂದಿಗೆ ಆಚರಿಸಿದೆ. ಶ್ವೇತಪ್ರಭು, ಕಲ್ಪನ, ಮೀನಾಕ್ಷಿ ಮೇಟಿ, ಟಿ.ಎಂ. ಜಾನಕಿ ಅವರುಗಳ ಗಾಯನ, ಸ್ವತಃ ವಿದ್ಯಾಶ್ರೀ ಹಾರಕೂಡೆ, ಸುನಯನ ಹಾರಕೂಡೆ, ಬುದ್ದಪ್ಪ ಅವಟಿ ಮೊದಲಾದವರು ಸ್ವರಚಿತ ಕವನಗಳನ್ನು ವಾಚಿಸಿದರು. ಕನ್ನಡ ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಶ್ರೀ ಬಲವಂತರಾವ್ ಪಾಟೀಲ್, ನಿವೃತ್ತ ಜಂಟಿ ನಿರ್ದೇಶಕ ಡಾ. ಎಸ್. ಆರ್. ಹೊನ್ನಲಿಂಗಯ್ಯ, ಪ್ರಾಧ್ಯಾಪಕಿ ಡಾ.ಎನ್.ಆರ್. ಲಲಿತಾಂಬ ಮೊದಲಾದ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮಹಿಳಾ ದಿನಾಚರಣೆ

ಎಲೆಮರೆಯ ಕಾಯಾಗಿ ಸೇವೆ ಸಲ್ಲಿಸುತ್ತಿರುವ ಸಾಂಸ್ಕೃತಿಕ ಸಂಘಟಕಿಯರನ್ನು ಗುರುತಿಸಿ ವೀರರಾಣಿ ಕೆಳದಿ ಚೆನ್ನಮ್ಮನ ಹೆಸರಿನಲ್ಲಿ ಪ್ರಶಸ್ತಿ ನೀಡುವುದರೊಂದಿಗೆ ಮಹಿಳಾ ದಿನಾಚರಣೆಯನ್ನು ಬಳಗ ನಡೆಸಿದೆ. ದೂರದ ನ್ಯೂಜಿಲ್ಯಾಂಡ್‌ನಲ್ಲಿ ಬಸವ ತತ್ತ÷್ವ ಪ್ರಸಾರದೊಂದಿಗೆ ಕನ್ನಡ ಸಂಸ್ಕೃತಿಯನ್ನು ಹರಡುತ್ತಿರುವ ೭೬ರ ಹರಯದ ಉಷಾ ಫಾಲಾಕ್ಷಪ್ಪ, ಲಯನೆಸ್ ವಿಕ್ಟರಿಯ ಪ್ರೇಮ ಶಾಂತವೀರಯ್ಯ, ಅಕ್ಕನ ಬಳಗದ ನಾಗರತ್ನ ಶಿವಣ್ಣ, ನಮಸದ ಶೈಲಜ ಉದಯಶಂಕರ್, ಶಿವಾಚಾರಿಣಿಯರ ಸಮಾಜದ ಉಷಾಕಿರಣ್, ಭಗಿನಿಯ ಗಾಯಿತ್ರಿ ಸದಾಶಿವಪ್ಪ ಅವರುಗಳಿಗೆ "ಕೆಳದಿ ಚೆನ್ನಮ್ಮ" ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಚನಜ್ಯೋತಿಬಳಗ, ಸುನಾದ, ಅಕ್ಕನ ಬಳಗ, ನಮಸ, ಮೊದಲಾದ ಸಂಘಟನೆಗಳ ಸದಸ್ಯೆಯರು ಗೀತ ಗಾಯನ ನಡೆಸಿಕೊಟ್ಟರು. ಚಿಂತಕಿ ಶ್ರೀಮತಿ ಮುಕ್ತಾ ಕಾಗಲಿ, ಹಿರಿಯ ಅಧಿಕಾರಿಗಳಾದ ಶ್ರೀಮತಿ ಶಾಂತಾ ಹುಲ್ಮನಿ, ಶ್ರೀಮತಿ ಜಯಲಕ್ಷಿö್ಮ, ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್. ಪಿನಾಕಪಾಣಿ, ಹ್ಯಾಬಿಟೇಟ್ ವೆಂಚರ್ಸ್ ಗುರುಪ್ರಸಾದ್ ಕುಚ್ಚಂಗಿ, ಸಮಾಜ ಸೇವಕಿ ಕಲ್ಪನ ನಟರಾಜ್, ರಂಗವಿಮರ್ಶಕ ರುದ್ರೇಶ್ ಅದರಂಗಿ, ಗಾಯಕಿಯರಾದ ಮೀನಾಕ್ಷಿಮೇಟಿ, ವೀಣಾಮೂರ್ತಿ, ಟಿ.ಎಂ. ಜಾನಕಿ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜನಪದ ಕೋಗಿಲೆಗೆ ಅಭಿನಂದನೆ

ಸಾವಿರ ಹಾಡುಗಳನ್ನು ನೆನಪಿನಾಳದಿಂದಲೇ ಹಾಡುವ ಕಲ್ಯಾಣ ಕರ್ನಾಟಕದ ಕೋಗಿಲೆ ಶ್ರೀಮತಿ ಚಂದ್ರಕಲಾ ಸಂಗಪ್ಪ ಹಾರಕೂಡೆ ಅವರ "ಚಂದ್ರಗಾನಸಿರಿ" ಕೃತಿಯ ಬಿಡುಗಡೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಿರಿಯರಾದ ಡಾ. ಗೊ.ರು. ಚನ್ನಬಸಪ್ಪನವರಿಂದ ನಡೆಸಲಾಯಿತು. ಇದೇ ಸಂದರ್ಭದಲ್ಲಿ "ಚಂದ್ರಸಂಗ ಸಿರಿಗಾನ" ಧ್ವನಿಸಾಂದ್ರಿಕೆಯೂ ಲೋಕಾರ್ಪಿತವಾಯಿತು. "ಜನಪದ ಕೋಗಿಲೆಗೆ ಆತ್ಮೀಯ ಅಭಿನಂದನೆ" ಯಾಗಿ ಎಲೆಮರೆಯ ಕಾಯಾಗಿರುವ ಚಂದ್ರಕಲಾ ಸಂಗಪ್ಪ ದಂಪತಿಗಳನ್ನು ಅಭಿನಂದಿಸಲಾಯಿತು. ಮುಧೋಳದ ಡಾ. ಶಿವಾನಂದ ಕುಬಸದರು, ಉದ್ಯಮಿ ಶ್ರೀ ಪ್ರಭುದೇವ ಚಿಗಟೇರಿ, ಕನ್ನಡ ಸಂಸ್ಕೃತಿಯ ಇಲಾಖೆಯ ಜಂಟಿ ನಿರ್ದೇಶಕ ಶ್ರೀ ಬಲವಂತರಾವ್ ಪಾಟೀಲ್ ಮೊದಲಾಗಿ ಹಲವು ಗಣ್ಯರು ಭಾಗಿಯಾದ ಕಾರ್ಯಕ್ರಮದಲ್ಲಿ ಹಾರಕೂಡೆ ಮನೆತನದವರು ಕಲ್ಯಾಣ ಕರ್ನಾಟಕದ ಜನಪದ ಸೊಗಡನ್ನು ಹರಿಸಿದರು.