ನೆರವು

ನೆರವು – ಧನಸಹಾಯ

ವಚನಜ್ಯೋತಿ ಬಳಗ ಎಳೆಯ ಕಿರಿಯರಲ್ಲಿ ವಚನ ಸಂಸ್ಕೃತಿಯ ಪ್ರಸಾರಕ್ಕೆ ಕಟಿಬದ್ಧವಾಗಿದೆ. ಎಳೆಯ – ಕಿರಿಯ - ಯುವ ಮನಸ್ಸುಗಳಲ್ಲಿ ಸದ್ಭಾವನೆಯ ಬೀಜವನ್ನು ಬಿತ್ತಿ ಕಾಯಕ - ದಾಸೋಹ ಮಂತ್ರವನ್ನು ಮನನ ಮಾಡಿಸಿ ಕಲ್ಯಾಣ ರಾಜ್ಯ ನಿರ್ಮಾಣ ಮಾಡುವ ಗುರಿಯನ್ನು ಹೊಂದಿದೆ. ಗಣಕೀಕರಣ ಮತ್ತು ಜಾಗತೀಕರಣದಲ್ಲಿ ಮರೆಯಾಗಿ ಹೋಗುತ್ತಿರುವ ಪ್ರೀತಿ-ವಿಶ್ವಾಸವನ್ನು ಜನಸಾಮಾನ್ಯರಲ್ಲಿ ಮೂಡಿಸಿ ಸ್ವಾಭಿಮಾನದ ಬದುಕನ್ನು ನಡೆಸಲು ಪ್ರೇರೇಪಿಸುತ್ತದೆ. ‘ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ, ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವವರು’ ಎಂಬ ಅಣ್ಣನವರ ನುಡಿಯಂತೆ ಸೂರ್ಯನ ಬೆಳಕಿನಲ್ಲಿ ಅದ್ಭುತ ಜೀವನವನ್ನು ರೂಪಿಸುತ್ತದೆ.

ನೀವೂ ಸಹ ನಮ್ಮ ಈ ವಚನ ಸಂಸ್ಕೃತಿ ಪ್ರಸರಣದಲ್ಲಿ ಪಾಲುದಾರರಾಗಿ.

ಉದಾರವಾಗಿ ಕೊಡುಗೆಯನ್ನು ನೀಡಿ ವಚನಜ್ಯೋತಿಯ ಕ್ರಿಯಾತ್ಮಕ ಚಟುವಟಿಕೆಗಳನ್ನು ಬೆಂಬಲಿಸಿ.

ನಿಮ್ಮ ಒಂದು ಸಣ್ಣ ಕೊಡುಗೆ; ಸಂಸ್ಕೃತಿ ಸಂಪನ್ನತೆಯತ್ತ ನಡಿಗೆ

ನಿಮ್ಮ ಕೊಡುಗೆಯನ್ನು ವಚನಜ್ಯೋತಿ ಬಳಗದ ಹೆಸರಿಗೆ ಚೆಕ್ ಮೂಲಕ ನೀಡಬಹುದು. ಆರ್.ಟಿ.ಜಿ.ಎಸ್. ಮೂಲಕವು ತಾವು ನಮಗೆ ನೆರವಾಗಬಹುದು.

ಉತ್ತಮ ನಿರೀಕ್ಷೆಗಳೊಂದಿಗೆ ನಮಗೆ ನೀವು ನೆರವಾಗಬಹುದು. ವೈಯುಕ್ತಿಕವಾಗಿ ಮತ್ತು ಸಾಮೂಹಿಕವಾಗಿ ತಮ್ಮ ಅಮೂಲ್ಯ ಸಮಯದೊಡನೆ ನಮ್ಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ತಮಗೆ ಆತ್ಮೀಯ ಸ್ವಾಗತವನ್ನು ಕೋರುತ್ತೇವೆ.

ದಯಮಾಡಿ ತಮ್ಮ ಕೊಡುಗೆಯನ್ನು

ವಚನಜ್ಯೋತಿ ಬಳಗ
# 425/H, 5ನೇ ತಿರುವು, ಹೊಸಹಳ್ಳಿ, ವಿಜಯನಗರ, ಬೆಂಗಳೂರು-560040.

ಅಥವಾ

ನಮ್ಮ ಬ್ಯಾಂಕ್ ಖಾತೆ

Veerashaiva Sahakari Bank
Vijayanagar Branch
IFSC Code : HDFC0CVSBHO
A/c No. 309CA133
Vachanajyothi Balaga
Current Account.
ಗೆ ಸಂದಾಯವಾಗುವಂತೆ ನೀಡಬಹುದು.

ಹೆಚ್ಚಿನ ವಿವರಗಳಿಗೆ ಸಂಪಕಿಸಿ:
ಮೋಬೈಲ್ ಸಂಖ್ಯೆ: +91 98451 84267
ಇಮೇಲ್ : vachanajyothi.balaga@gmail.com