ವಚನಜ್ಯೋತಿ ವಚನ ಕಲಿಕಾ ಶಿಬಿರಗಳನ್ನು ನಡೆಸುತ್ತಾಬಂದಿದೆ. ಕಾಲೇಜು ವಿದ್ಯಾರ್ಥಿಗಳಿಗೆ, ಪ್ರೌಢಶಾಲಾ, ಪ್ರಾಥಮಿಕ ಶಾಲಾ ಮಕ್ಕಳಿಗೆ ಮತ್ತು ಆಸಕ್ತ ಜನತೆಗೂ ಸಹ ವಚನ ಕಲಿಕೆಯನ್ನು ನಡೆಸಿಕೊಡಲಾಗಿದೆ.
ರಾಜಧಾನಿಯ ಎಸ್.ಜೆ.ಆರ್.ಸಿ. ಮಹಿಳಾ ಕಾಲೇಜಿನಲ್ಲಿ ಆರು ತಿಂಗಳು ವಚನ ತರಗತಿಗಳನ್ನು ಯಶಸ್ವಿಯಾಗಿ ನಡೆಸಿದೆ. ಪ್ರೌಢಶಾಲಾ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ವಚನ ತರಗತಿಗಳನ್ನು ನಡೆಸಲು ಯೋಜನೆ ರೂಪಿಸಲಾಗಿದೆ.
ಮಹದೇಶ್ವರನಗರದಲ್ಲಿ ಆಸಕ್ತ ಮಹಿಳೆಯರಿಗೆ ವಚನ ಕಲಿಕಾ ಶಿಬಿರವನ್ನು ನಡೆಸಿರುವ ಹೆಮ್ಮೆ ಬಳಗದ್ದಾಗಿದೆ. ಮುಂದಿನ ದಿನಗಳಲ್ಲಿಯೂ ಆಸಕ್ತ ಜನತೆಗೆ ವಚನ ಕಲಿಕಾ ಶಿಬಿರಗಳನ್ನು ನಡೆಸಲಾಗುವುದು.