ಹೊಸ ಸಂವತ್ಸರವನ್ನು ಸಂಗೀತದೊಂದಿಗೆ ಸ್ವಾಗತಿಸುವ ‘ವಚನ ಸಂಗೀತ ಯುಗಾದಿ’ ಬಳಗದ ಮತ್ತೊಂದು ಮಹತ್ವದ ಕಾರ್ಯಕ್ರಮ. ಹಂಪಿನಗರದ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆದ ವಚನ ಸಂಗೀತ ಯುಗಾದಿ ಕಾರ್ಯಕ್ರಮಗಳು ಜನತೆಯನ್ನು ಸಂತಸದಿಂದ ತಣಿಸಿದವು. ನಾಡಿನ ಸುವಿಖ್ಯಾತ ಗಾಯಕ ಡಾ|| ಶಿವಮೊಗ್ಗ ಸುಬ್ಬಣ್ಣ, ಕನ್ನಡದ ಕೋಗಿಲೆ ಶ್ರೀಮತಿ ಕಸ್ತೂರಿ ಶಂಕರ್, ಗಾಯಕರುಗಳಾದ ರವೀಂದ್ರ ಸೊರಗಾವಿ, ವಿಜಯಕುಮಾರ ಜಿತೂರಿ, ತರುಣ ಸಂಗೀತ ನಿರ್ದೇಶಕರುಗಳಾದ ಬಿ.ಜೆ. ಭರತ್, ಅನೂಪ್ ಸೀಳಿನ್, ಗಾಯಕಿಯರಾದ ಸುಪ್ರಿಯಾ ಆಚಾರ್ಯ, ಸರಸ್ವತಿ ಹೆಗಡೆ, ರಂಗ ಕಲಾವಿದ ಹುಲಿಕಲ್ ನಾಗರಾಜ್, ಹಿಂದೂಸ್ಥಾನಿ ಸಂಗೀತ ವಿದ್ವಾಂಸರಾದ ಪಂಡಿತ ಮುದ್ದುಮೋಹನ್, ಪಂಡಿತ ದೇವೇಂದ್ರಕುಮಾರ ಮುಧೋಳ್ ಮೊದಲಾದವರು ವಚನ ಸಂಗೀತ ಯುಗಾದಿಯಲ್ಲಿ ಭಾಗವಹಿಸಿದ್ದರು. ಹಂಪಿನಗರದಲ್ಲಿ ವಾಸಿಸುತ್ತಿರುವ ನಾಡಿನ ಗಣ್ಯ ಸಾಹಿತಿಗಳಾದ ಡಾ|| ಎಂ. ಚಿದಾನಂದಮೂರ್ತಿ, ಡಾ|| ಸಾ.ಶಿ. ಮರುಳಯ್ಯ, ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ, ಡಾ|| ಬಿ.ಎಸ್. ಸ್ವಾಮಿ, ಶ್ರೀಮತಿ ಪ್ರೇಮಾಭಟ್, ಮೊದಲಾದವರು ಕರ‍್ಯಕ್ರಮದಲ್ಲಿ ಭಾಗವಹಿಸಿ ಮುದಗೊಂಡರು. ಮುಂದಿನ ವರ್ಷಗಳಲ್ಲಿಯೂ ವಚನ ಸಂಗೀತ ಯುಗಾದಿಯನ್ನು ಅರಳಿಕಟ್ಟೆ, ಬಯಲು ಮಂಟಪ, ಯೋಗಮಂದಿರಗಳಲ್ಲಿ ನಡೆಸಲಾಗಿದೆ.