ವಚನ ಸಂಜೆ

ವಚನ ಸಂಜೆ

ಬೆಂಗಳೂರು ಮಹಾನಗರದಲ್ಲಿನ ವಿವಿಧ ಬಡಾವಣೆಗಳ ಆಸಕ್ತ ಅಭಿಮಾನಿ ಬಂಧುಗಳ ಸ್ವಗೃಹದಲ್ಲಿ ನಾವು ನಡೆಸಿರುವ ವಚನ ಸಂಜೆ ಎಲ್ಲರ ಮನ ಸೆಳೆದಿದೆ. ಸಾಮೂಹಿಕ ಪ್ರಾರ್ಥನೆ, ಸಾಮೂಹಿಕ ವಚನ ಗಾಯನ, ವೈಯುಕ್ತಿಕ ವಚನ ಪಠಣ, ಒಂದಷ್ಟು ಗಾಯನ, ವಿಷಯದ ಮೇಲೆ ಉಪನ್ಯಾಸ . . . . ನಮ್ಮ ‘ವಚನ ಸಂಜೆ’ಯ ವೈಶಿಷ್ಟ್ಯಗಳು. ಜನತೆಯಲ್ಲಿ ವಚನ ವಿಚಾರದ ಬೀಜವನ್ನು ಬಿತ್ತುವುದು ನಮ್ಮ ಮುಖ್ಯ ದ್ಯೇಯವಾಗಿದೆ ರ್ಶರೀ ಸಿದ್ಧಗಂಗಾ ಕ್ಷೇತ್ರದಲ್ಲಿ ಪರಮಪೂಜ್ಯರ ಸಮ್ಮುಖದಲ್ಲಿ ನಾವು ನಡೆಸಿರುವ ‘ವಚನ ಮುಂಜಾನೆ’ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನೂರಾರು ವಚನಸಂಜೆಗಳನ್ನು ವಚನಜ್ಯೋತಿ ಬಳಗ ನಡೆಸಿದ್ದು ಗ್ರಾಮಾಂತರ ಪ್ರದೇಶಗಳಲ್ಲಿಯೂ ಬಳಗ ವಚನ ಸಂಜೆಯನ್ನು ನಡೆಸಿದೆ. ವಚನ ಸಂಜೆಯ ಮೂಲಕ ನೂರಾರು ಗಾಯಕರು - ಹತ್ತಾರು ಉಪನ್ಯಾಸಕರುಗಳಿಗೆ ವೇದಿಕೆ ಒದಗಿಸಿದೆ.