ಕರ್ನಾಟಕದ ಇತಿಹಾಸದಲ್ಲಿ ವಚನ ಚಳವಳಿ ಒಂದು ಅಪೂರ್ವ ಘಟನೆ, ವಚನ ಸೃಷ್ಟಿ ಒಂದು ಅನನ್ಯ ಪ್ರಯೋಗ. ಸಮಾಜದ ಎಲ್ಲ ವರ್ಗ, ಎಲ್ಲ ವರ್ಣಗಳ ಜನಸಮುದಾಯ ಬಸವಣ್ಣನವರ ನೇತೃತ್ವದಲ್ಲಿ ಕೈಕೊಂಡಿದ್ದ ವ್ಯಕ್ತಿ ಕಲ್ಯಾಣ ಮತ್ತು ಸಮಾಜ ಕಲ್ಯಾಣ ಚಳವಳಿಯ ಸೃಷ್ಟಿಯೆನಿಸಿದ ವಚನಗಳು ಜಾಗತಿಕ ಸಾಹಿತ್ಯದ ಮಹತ್ವಪೂರ್ಣ ಭಾಗವೆನಿಸಿವೆ.
ವಚನಜ್ಯೋತಿ ಬಳಗದ ಮೂಲ ಆಶಯವೇ ಎಳೆಯ - ಕಿರಿಯ ಮನಸ್ಸುಗಳಲ್ಲಿ ವಚನಗಳ ಸಂದೇಶವನ್ನು ತಿಳಿಹೇಳುವುದು. ಈ ನಿಟ್ಟಿನಲ್ಲಿ ಇಪ್ಪತ್ತೆರಡು ವರ್ಷಗಳ ಹಿಂದೆ ನಾವು ಆರಂಭಿಸಿದ ಶಾಲೆಯಿಂದ ಶಾಲೆಗೆ ವಚನಜ್ಹೋತಿ; ಕನ್ನಡ ಸಂಸ್ಕೃತಿ ಸಂಚಾರವು ಸಾವಿರಾರು ಶಾಲೆಗಳಲ್ಲಿ ನಡೆದಿದೆ. ವಾರ್ಷಿಕೋತ್ಸವದ ಹೆಸರಿನಲ್ಲಿ "ವಚನಾಮೃತವರ್ಷಿಣಿ ಮಹೋತ್ಸವ"ವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ೨೦೧೭ರಿಂದ ಮಕ್ಕಳ ವಚನ ಮೇಳದ ಮೂಲಕ ವಿದ್ಯಾರ್ಥಿಗಳಲ್ಲಿ ವಚನ ಸಂಸ್ಕೃತಿಯನ್ನು ಪಸರಿಸಲಾಗುತ್ತಿದೆ.
ವಚನ ಜ್ಯೋತಿ ಬಳಗವು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ವಚನ ಸಂಬಂಧಿ ಕಾರ್ಯಚಟುವಟಿಕೆಗಳು
ಅಷ್ಟಮಿ ನವಮಿ ಎಂಬ ಕಲ್ಪಿತವೇಕೋ ಶರಣಂಗೆಬಸವಣ್ಣ
ತಪ್ಪಿತ್ತು ಗಣಪದವಿ, ಲಿಂಗಕ್ಕೆ ದೂರ.
ಒಬ್ಬರಿಗಾಳಾಗಿ, ಒಬ್ಬರನೋಲೈಸುವ
ನಿರ್ಬುದ್ಧಿಮನುಜರನೇನೆಂಬೆ,
ಕೂಡಲಸಂಗಮದೇವಾ !
ಹಸಿಯ ಸೊಪ್ಪು ಮುರಿದು ತರುವಾಗಅಂಬಿಗರ ಚೌಡಯ್ಯ
ನೀವೇನು ಆಡಿನ ಮಕ್ಕಳೆ?
ಹಸಿಯ ಸೊಪ್ಪು ತಂದು ಬಿಸಿ ಮಾಡಿ
ಶಶಿಧರನೆಂಬ ಜಂಗಮಕ್ಕೆ ನೀಡಲು,
ಆ ಲಿಂಗದ ಹಸಿವು ಹೋಯಿತ್ತೆಂದಾತ
ನಮ್ಮಂಬಿಗ ಚೌಡಯ್ಯ.
ಅಯ್ಯಾ, ತನ್ನ ತಾನರಿಯದೆ,ಮಡಿವಾಳ ಮಾಚಿದೇವ
ತನ್ನ ಇಷ್ಟಲಿಂಗದ ಹೊಲಬು ತಿಳಿಯದೆ,
ಕಾಮವ ತೊರೆಯದೆ, ಹೇಮವ ಜರೆಯದೆ,
ನಾವು ಹರ ಗುರು ಚರ ಷಟ್ಸ್ಥಲದ ವಿರಕ್ತರೆಂದು
ಚೆನ್ನಾಗಿ ನುಡಿದುಕೊಂಡು, ಕಾವಿ ಕಾಷಾಯಾಂಬರವ ಹೊದ್ದು,
ಶಂಖ ಗಿಳಿಲು ದಂಡಾಗ್ರವ ಹೊತ್ತು,
ಕೂಳಿಗಾಗಿ ನಾನಾ ದೇಶವ ತಿರುಗಿ,
ಕಾಂಚನಕ್ಕೆ ಕೈಯೊಡ್ಡುವ ಪಂಚಮಹಾಪಾತಕರನು
ಕಾಗೆಯ ಗರ್ಭದಲ್ಲಿ ಹುಟ್ಟಿಸಿ ಕಾಕಾ ಎಂದು
ಕೂಗಿಸುತಿರ್ಪ[ನು] ಕಾಣಾ, ಕಲಿದೇವರದೇವ.
ತನು ನಿಮ್ಮದೆಂದ ಬಳಿಕ ಎನಗೆ ಬೇರೆ ತನುವಿಲ್ಲಬಸವಣ್ಣ
ಮನ ನಿಮ್ಮದೆಂದ ಬಳಿಕ ಬೇರೆ ಮನವಿಲ್ಲ
ಧನ ನಿಮ್ಮದೆಂದ ಬಳಿಕ ಎನಗೆ ಬೇರೆ ಧನವಿಲ್ಲ
ಇಂತೀ ತ್ರಿವಿಧವೂ ನಿಮ್ಮದೆಂದರಿದ ಬಳಿಕ ಎನಗೆ ಬೇರೆ
ವಿಚಾರವುಂಟೆ ಕೂಡಲಸಂಗಮದೇವಾ
ಅಂಗೈಯೊಳಗಣ ಲಿಂಗಮ್ರ್ಕೂಯ ಕಂಗಳಲ್ಲಿಂಗಗೊಟ್ಟಡೆ,ಸಿದ್ಧರಾಮೇಶ್ವರ
ತಿಂಗಳ ಸೂಡನಾದೆ ನೋಡಾ ಅಯ್ಯಾ.
ಮಂಗಳಮೂರ್ತಿ ಗಂಗಾಜೂಟಾಂಗಮಯ
ಕಪಿಲಸಿದ್ಧ ಮಲ್ಲಿಕಾರ್ಜುನಂಗ ಬೇರೆಂದರಿಯಲ್ಲ ನೋಡಾ,
ನಿಜದ ನಿರ್ವಯಲಲ್ಲಯ್ಯನೆ
ನಂದಿ ದೇವಂಗೆ, ಖಳ ಸಿರಿಯಾಳಂಗೆ,ಅಕ್ಕಮಹಾದೇವಿ
ಲಿಂಗ ದಾಸಿಮಯ್ಯಂಗೆ, ಜಾಗರ ಬಸವಣ್ಣಂಗೆ,
ಆದರಿಕೆಯ ಬಿಟ್ಟು ಜೂಜನಾಡರೆ ನಮ್ಮವರಂದು ?
ಒಬ್ಬಂಗೆ ಮಗನ ರಪಣ, ಒಬ್ಬಂಗೆ ಸೀರೆಯ ರಪಣ,
ಒಬ್ಬಂಗೆ ತನು ಮನ ಧನದ ರಪಣ.
ಮೂವರೂ ಮೂದಲಿಸಿ ಮುಕ್ಕಣ್ಣನ ಗೆಲಿದರು ಎನ್ನ ದೇವ ಚೆನ್ನಮಲ್ಲಿಕಾರ್ಜುನಾ.
ಲಿಂಗವಲ್ಲದನ್ಯವರಿನಯೆ, ಶಿವಲಿಂಗವಲ್ಲದನ್ಯವ ನೆನೆಯೆ,ಬಸವಣ್ಣ
ಜಂಗಮವಲ್ಲದನ್ಯಕ್ಕೆರಗೆ, ಪ್ರಸಾದವಲ್ಲದನ್ಯವ ಕೊಳ್ಳೆ,
ಶಿವಗಣಂಗಳಲ್ಲದನ್ಯರ ಬೆರೆಯೆ.
ಕೂಡಲಸಂಗಮದೇವರು ಸಾಕ್ಷಿಯಾಗಿ
ನಾನಾವ ತೀರ್ಥಯಾತ್ರೆಗಳನರಿಯೆ.
ಸರ್ವಾಂಗಲಿಂಗವಾದ ಶರಣನ ಕಾಯಅಂಬಿಗರ ಚೌಡಯ್ಯ
ಆವ ದೇಶದಲ್ಲಿ ಆಳಿದಡೇನು?
ಎಲ್ಲಿ ಆಳಿದಡೇನುರಿ ಉಳಿದಡೇನು?
ಕಾಯ ಉಳಿಯದೆ ಬಯಲಾದಡೇನು?
ಅದೇತರಲ್ಲಿ ಹೋದಡು ಲಿಂಗೈಕ್ಯಪದಕ್ಕೆ
[ಕುತ್ತ] ಕೊಡಲಿಲ್ಲವೆಂದನಂಬಿಗ ಚೌಡಯ್ಯ.
ನಾವು ಶಿವಪ್ರಸಾದಿಗಳೆಂದು ನುಡಿವ ಅಣ್ಣಗಳಿರಾ,ಮಡಿವಾಳ ಮಾಚಿದೇವ
ನೀವು ಶಿವಪ್ರಸಾದಿಗಳೆಂತಾದಿರಿ ಹೇಳಿರಣ್ಣ.
ಅರಿಯದಿರ್ದಡೆ ಶಿವಪ್ರಸಾದದ ಕಲೆನೆಲೆಯ ಕೇಳಿರಣ್ಣ.
ಗುರುಲಿಂಗಜಂಗಮದಿಂದ
ವೇಧಾಮಂತ್ರಕ್ರಿಯಾದೀಕ್ಷೆಯ ಬೆಸಗೊಂಡು,
ತನುಮನಪ್ರಾಣಂಗಳ
ಇಷ್ಟಪ್ರಾಣಭಾವಲಿಂಗಂಗಳಿಗೆ ಮೀಸಲ ಮಾಡಿ,
ನಿರ್ವಂಚಕತ್ವದಿಂದ ಸಮರ್ಪಿಸಿ,
ಭೇದಭಾವವನಳಿದು, ಕ್ಷೀರಕ್ಷೀರ ಬೆರೆದಂತೆ,
ಗುರುಮಾರ್ಗಾಚಾರದಲ್ಲಿ ಆಚರಿಸಬಲ್ಲಾತನೆ
ಶಿವಪ್ರಸಾದಿ ನೋಡಾ, ಕಲಿದೇವರದೇವ
ಮನ ಮುಟ್ಟದ ಮಜ್ಜನ ತನು ತಾಗದ ದೇಹಾರ,ಅಲ್ಲಮಪ್ರಭುದೇವರು
ಭಾವ ತಾಗದ ಪೂಜೆ, ಎದೆ ತಾಗದ ನೋಟ
ವಾಯು ತಾಗದ ನಲಿಂಗದ¥sgಠ್ಞವ ತೋರಾ ಗುಹೇಶ್ವರಾ.
ಪಡೆವುದರಿದು ನರಜನ್ಮವ,ಅಕ್ಕಮಹಾದೇವಿ
ಪಡೆವುದರಿದು ಹರಭಕ್ತಿಯ,
ಪಡೆವುದರಿದು ಗುರುಕಾರುಣ್ಯವ,
ಪಡೆವುದರಿದು ಲಿಂಗಜಂಗಮಸೇವೆಯ,
ಪಡೆವುದರಿದು ಸತ್ಯಶರಣರನುಭಾವವ.
ಇಂತಾಗಿ ಚೆನ್ನಮಲ್ಲಿಕಾರ್ಜುನಯ್ಯನ ಶರಣರ ಅನುಭಾವದಲ್ಲಿ ನಲಿನಲಿದಾಡು
ಕಂಡೆಯಾ ಎಲೆ ಮನವೆ.