ಶಾಲೆಯಿಂದ ಶಾಲೆಗೆ

ಶಾಲೆಯಿಂದ ಶಾಲೆಗೆ

"ಶಾಲೆಯಿಂದ ಶಾಲೆಗೆ ವಚನಜ್ಯೋತಿ; ಕನ್ನಡ ಸಂಸ್ಕೃತಿ ಸಂಚಾರ" ಬಳಗದ ವಿಶಿಷ್ಟ ಕಾರ್ಯಕ್ರಮ.

ಒಂದು ಶಾಲೆಯನ್ನು ಸಂದರ್ಶಿಸುವುದು. ಅಲ್ಲಿಯ ಮಕ್ಕಳನ್ನು ಸಮಾಹಿತಗೊಳಿಸಿ ಸಮೂಹ ವಚನ ಪ್ರಾರ್ಥನೆಯಿಂದ ಆರಂಭ ಮಾಡುವುದು. ವಚನಗಳು ಎಂದರೇನು? ಅವುಗಳ ವಿಶೇಷತೆಯೇನು? ವ್ಯಕ್ತಿತ್ವ ವಿಕಸನದಲ್ಲಿ ಅವುಗಳ ಪಾತ್ರವೇನು? . . . ಮೊದಲಾದ ವಿಚಾರಗಳನ್ನು ಮಕ್ಕಳೊಂದಿಗೆ ಹಂಚಿಕೊಳ್ಳುವುದು. ವಚನ ಗಾಯನ – ಕಥೆ – ವಿಚಾರಗಳ ಮೂಲಕ ಅವರ ಮನಸ್ಸನ್ನು ಆವರಿಸುವುದು. ನಾವುಗಳಷ್ಟೇ ಹಾಡದೇ, ವಿದ್ಯಾರ್ಥಿಗಳಿಂದಲೂ ವಚನಗಳನ್ನು ಹಾಡಿಸುವುದು, ಓದಿಸುವುದು, ವಚನಗಳ ಕುರಿತಾಗಿ ಮಾತನಾಡಿಸುವುದು . . . ಮೂಲಕ ಅವರಲ್ಲಿ ವಚನಪರಂಪರೆಯನ್ನು ಮೂಡಿಸುವ ಕಾರ್ಯವನ್ನು ಬಳಗ ಮಾಡುತ್ತಾ ಬಂದಿದೆ. ಸರ್ಕಾರಿ ಶಾಲೆಗಳು, ಪಾಲಿಕೆ ಶಾಲೆಗಳು, ಅನುದಾನಿತ ಶಾಲೆಗಳು, ಇಂಗ್ಲಿಷ್ ಕಾನ್ವೆಂಟ್ ಗಳು, ಅಂಗನವಾಡಿಗಳು, ಮಾಂಟೆಸರಿಗಳು . . . ಹೀಗೆ ಸಾವಿರಾರು ಶಾಲೆಗಳಿಗೆ ಹೋಗಿದ್ದೇವೆ. ಹಾಡಿದ್ದೇವೆ, ಹಾಡಿಸಿದ್ದೇವೆ. ಮಾತನಾಡಿಸಿದ್ದೇವೆ. ಮಕ್ಕಳಲ್ಲಿ ವಚನಾಸಕ್ತಿಯನ್ನು ಬಿತ್ತಿದ್ದೇವೆ.